ಗೃಹ ಪ್ರವೇಶಗೊಂಡು 5 ದಿನಕ್ಕೆ ನೇಣಿಗೆ ಶರಣಾದ ಯುವತಿ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಮಂಗಳೂರು: ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಬೆಳಕಿಗೆ ಬಂದಿದೆ. ಗೃಹ ಪ್ರವೇಶಗೊಂಡು ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣಿಗೆ ಶರಣಾಗಿದ್ದಾಳೆ. ಕುಂಪಲ ಚಿತ್ರಾಂಜಲಿ ನಗರದ ನಿವಾಸಿ ಅಶ್ವಿನಿ ಬಂಗೇರ(25) ಆತ್ಮಹತ್ಯೆ ಮಾಡಿಕೊಂಡ ಯುವತಿ. 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾಳೆ. ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋದ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಶ್ವಿನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಒಂದೂವರೆ […] The post ಗೃಹ ಪ್ರವೇಶಗೊಂಡು 5 ದಿನಕ್ಕೆ ನೇಣಿಗೆ ಶರಣಾದ ಯುವತಿ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ appeared first on News First Kannada.

ಗೃಹ ಪ್ರವೇಶಗೊಂಡು 5 ದಿನಕ್ಕೆ ನೇಣಿಗೆ ಶರಣಾದ ಯುವತಿ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಮಂಗಳೂರು: ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಬೆಳಕಿಗೆ ಬಂದಿದೆ. ಗೃಹ ಪ್ರವೇಶಗೊಂಡು ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣಿಗೆ ಶರಣಾಗಿದ್ದಾಳೆ.

ಕುಂಪಲ ಚಿತ್ರಾಂಜಲಿ ನಗರದ ನಿವಾಸಿ ಅಶ್ವಿನಿ ಬಂಗೇರ(25) ಆತ್ಮಹತ್ಯೆ ಮಾಡಿಕೊಂಡ ಯುವತಿ. 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾಳೆ. ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋದ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಶ್ವಿನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದಳು. ಕುಂಪಲದಲ್ಲಿ ಸಂಗೀತ ಎಂಬವರಿಂದ ಅಶ್ವಿನಿ ಮನೆಯೊಂದನ್ನ ಖರೀದಿಸಿದ್ದಳು. ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದಳು.

ಆದರೆ ಮನೆ ಖರೀದಿಸಿ ಮೋಸ ಹೋದ ಬಳಿಕ ಅಶ್ವಿನಿ‌ ಖಿನ್ನತೆಗೊಳಗಾಗಿದ್ದಾಳೆ. ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಡೆಟ್​ ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಇದೇ ವಿಚಾರವಾಗಿ ನೊಂದು ಆತ್ಮ ಹತ್ಯೆಗೈದಿದ್ದಾಳೆ.

ಅಶ್ವಿನಿ ಬರೆದ 24 ಪುಟಗಳ ಡೆತ್​ ನೋಟ್​ ಪೊಲೀಸರಿಗೆ ದೊರೆತಿದೆ. ಮೃತದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

The post ಗೃಹ ಪ್ರವೇಶಗೊಂಡು 5 ದಿನಕ್ಕೆ ನೇಣಿಗೆ ಶರಣಾದ ಯುವತಿ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ appeared first on News First Kannada.