ಪ್ರಧಾನಿ ಮೋದಿಗೆ ಪ್ರೀತಿಯಿಂದ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟ ಮಮತಾ ಬ್ಯಾನರ್ಜಿ..!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೊದಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ವಿವಿಧ ಥಳಿಯ ಮಾವಿನ ಹಣ್ಣುಗಳನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಮಾವಿನ ಹಣ್ಣುಗಳನ್ನು ಕಳುಹಿಸಿ ಕೊಡುತ್ತಿರೋದು ಇದೇ ಮೊದಲೇನಲ್ಲ. 12 ವರ್ಷಗಳಿಂದ ಈ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಇದು ಮಾವಿನ ಹಣ್ಣುಗಳ ಸೀಸನ್. ಪಶ್ಚಿಮ ಬಂಗಾಳದ ಜನಪ್ರಿಯ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದಾರೆ. ನ್ಯಾಯಮೂರ್ತಿಗಳಿಗೂ ಪಾರ್ಸಲ್..! ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಗೆ ಮಾತ್ರವಲ್ಲ ಜಸ್ಟೀಸ್ ಡಿ.ವಿ.ವೈ ಚಂದ್ರಚೂಡ, ಬಾಂಗ್ಲಾದೇಶದ ಪ್ರಧಾನಿ […] The post ಪ್ರಧಾನಿ ಮೋದಿಗೆ ಪ್ರೀತಿಯಿಂದ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟ ಮಮತಾ ಬ್ಯಾನರ್ಜಿ..! appeared first on News First Kannada.

ಪ್ರಧಾನಿ ಮೋದಿಗೆ ಪ್ರೀತಿಯಿಂದ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟ ಮಮತಾ ಬ್ಯಾನರ್ಜಿ..!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೊದಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ವಿವಿಧ ಥಳಿಯ ಮಾವಿನ ಹಣ್ಣುಗಳನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಾರೆ.

ಮಮತಾ ಬ್ಯಾನರ್ಜಿ ಮಾವಿನ ಹಣ್ಣುಗಳನ್ನು ಕಳುಹಿಸಿ ಕೊಡುತ್ತಿರೋದು ಇದೇ ಮೊದಲೇನಲ್ಲ. 12 ವರ್ಷಗಳಿಂದ ಈ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಇದು ಮಾವಿನ ಹಣ್ಣುಗಳ ಸೀಸನ್. ಪಶ್ಚಿಮ ಬಂಗಾಳದ ಜನಪ್ರಿಯ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದಾರೆ.

ನ್ಯಾಯಮೂರ್ತಿಗಳಿಗೂ ಪಾರ್ಸಲ್..!
ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಗೆ ಮಾತ್ರವಲ್ಲ ಜಸ್ಟೀಸ್ ಡಿ.ವಿ.ವೈ ಚಂದ್ರಚೂಡ, ಬಾಂಗ್ಲಾದೇಶದ ಪ್ರಧಾನಿ ಅವರಿಗೂ ಕಳುಹಿಸಿಕೊಟ್ಟಿದ್ದಾರೆ. ಹಿಮಸಾಗರ, ಲಕ್ಷ್ಮಣಬೊಗ್ ಫಾಜಿಲ್ ಹಣ್ಣುಗಳನ್ನು ಅಲಂಕರಿಸಿದ ಬಾಕ್ಸ್​ಗಳಲ್ಲಿ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಈಗಾಗಲೇ ಈ ಹಣ್ಣುಗಳನ್ನು ಪ್ರಧಾನಮಂತ್ರಿಗಳ ಕಾರ್ಯಾಲಯ, ರಾಷ್ಟ್ರಪತಿಗಳ ಭವನ ಸ್ವೀಕಾರ ಮಾಡಿದೆ ಎಂದು ವರದಿಯಾಗಿದೆ.

ಮಮತಾ ಬ್ಯಾನರ್ಜಿ ಎನ್​​ಡಿಎ ಸರ್ಕಾರದ ಆಡಳಿತ ವೈಖರಿಯನ್ನು ಸದಾ ದೂಷಿಸುವ ಮೂಲಕ ಸುದ್ದಿ ಆಗುತ್ತಿರುತ್ತದೆ. ಆಡಳಿತ, ಅಧಿಕಾರದ ಆಚೆಗೆ ಪ್ರಧಾನಿ ಮೋದಿ ಜೊತೆ ಮಮತಾ ಉತ್ತಮ ಸಂಬಂಧ ಹೊಂದಿದ್ದಾರೆ. ಪ್ರತಿವರ್ಷ ದುರ್ಗಾ ಪೂಜೆಯ ಸಮಯದಲ್ಲಿ ಮೋದಿ ಅವರಿಗೆ ಸಿಹಿ ಹಾಗೂ ಬಟ್ಟೆಗಳನ್ನು ಕಳುಹಿಸಿಕೊಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

The post ಪ್ರಧಾನಿ ಮೋದಿಗೆ ಪ್ರೀತಿಯಿಂದ ಮಾವಿನ ಹಣ್ಣುಗಳನ್ನು ಕಳುಹಿಸಿಕೊಟ್ಟ ಮಮತಾ ಬ್ಯಾನರ್ಜಿ..! appeared first on News First Kannada.