WTC Final: ಇಶಾನ್ ಕಿಶನ್​ಗೂ ಅನ್ಯಾಯ.. ಇದಕ್ಕೆಲ್ಲ ಧೋನಿಯೇ ಹೊಣೆ ಎಂದ ಅಭಿಮಾನಿಗಳು

ಪ್ರತಿಷ್ಠಿತ WTC ಫೈನಲ್​​​ನಲ್ಲಿ ಇಶಾನ್​ ಕಿಶನ್​​ಗೆ ಸ್ಥಾನ ನೀಡ್ದೇ ಟೀಮ್ ಮ್ಯಾನೇಜ್​​ಮೆಂಟ್​ ಯಡವಟ್ಟು ಮಾಡ್ಕೊಳ್ತಾ? ಇಲ್ಲ ಮಹೇಂದ್ರ ಸಿಂಗ್ ಧೋನಿಯೇ ಜಾರ್ಖಂಡ್ ​​​​​​ಪ್ರತಿಭೆಗೆ ವಿಲನ್ ಆಗಿಬಿಟ್ರಾ? ಇಂಥದ್ದೊಂದು ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ಕೇಳಿ ಬರ್ತಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​​ ಆರಂಭಕ್ಕೂ ಮುನ್ನ ಕ್ರಿಕೆಟ್​ ಲೋಕದಲ್ಲಿ ಚರ್ಚೆಯಾಗಿದ್ದೇ, ಟೀಮ್ ಇಂಡಿಯಾ ಪರ ವಿಕೆಟ್​​​​​​​​​​​​​​​ ಕೀಪರ್​​​​ ಆಗೋದ್ಯಾರು? ಈ ಪ್ರಶ್ನೆಗೆ ಬಹುತೇಕರ ಉತ್ತರ ಒಂದೇ ಆಗಿತ್ತು.. ಅದೇ ಜಾರ್ಖಂಡ್ ಹೀರೋ ಇಶಾನ್ ಕಿಶನ್. ಟಾಸ್​ ಬೆನ್ನಲ್ಲೇ ಬಹುತೇಕರ […] The post WTC Final: ಇಶಾನ್ ಕಿಶನ್​ಗೂ ಅನ್ಯಾಯ.. ಇದಕ್ಕೆಲ್ಲ ಧೋನಿಯೇ ಹೊಣೆ ಎಂದ ಅಭಿಮಾನಿಗಳು appeared first on News First Kannada.

WTC Final: ಇಶಾನ್ ಕಿಶನ್​ಗೂ ಅನ್ಯಾಯ.. ಇದಕ್ಕೆಲ್ಲ ಧೋನಿಯೇ ಹೊಣೆ ಎಂದ ಅಭಿಮಾನಿಗಳು

ಪ್ರತಿಷ್ಠಿತ WTC ಫೈನಲ್​​​ನಲ್ಲಿ ಇಶಾನ್​ ಕಿಶನ್​​ಗೆ ಸ್ಥಾನ ನೀಡ್ದೇ ಟೀಮ್ ಮ್ಯಾನೇಜ್​​ಮೆಂಟ್​ ಯಡವಟ್ಟು ಮಾಡ್ಕೊಳ್ತಾ? ಇಲ್ಲ ಮಹೇಂದ್ರ ಸಿಂಗ್ ಧೋನಿಯೇ ಜಾರ್ಖಂಡ್ ​​​​​​ಪ್ರತಿಭೆಗೆ ವಿಲನ್ ಆಗಿಬಿಟ್ರಾ? ಇಂಥದ್ದೊಂದು ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ಕೇಳಿ ಬರ್ತಿದೆ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​​ ಆರಂಭಕ್ಕೂ ಮುನ್ನ ಕ್ರಿಕೆಟ್​ ಲೋಕದಲ್ಲಿ ಚರ್ಚೆಯಾಗಿದ್ದೇ, ಟೀಮ್ ಇಂಡಿಯಾ ಪರ ವಿಕೆಟ್​​​​​​​​​​​​​​​ ಕೀಪರ್​​​​ ಆಗೋದ್ಯಾರು? ಈ ಪ್ರಶ್ನೆಗೆ ಬಹುತೇಕರ ಉತ್ತರ ಒಂದೇ ಆಗಿತ್ತು.. ಅದೇ ಜಾರ್ಖಂಡ್ ಹೀರೋ ಇಶಾನ್ ಕಿಶನ್.

ಟಾಸ್​ ಬೆನ್ನಲ್ಲೇ ಬಹುತೇಕರ ನಿರೀಕ್ಷೆ ಹುಸಿಯಾಗಿತ್ತು. ಇದಕ್ಕೆ ಕಾರಣ ವಿಕೆಟ್ ಕೀಪರ್ ಆಗಿ ಕೆ.ಎಸ್.ಭರತ್​​​ ಗ್ಲೌಸ್ ತೊಟ್ಟಿದ್ದೇ ಆಗಿತ್ತು. ಆದ್ರೆ ಫೈನಲ್ಸ್​ನಲ್ಲಿ ಎಫೆಕ್ಟೀವ್ ಇಶಾನ್ ಬದಲಿಗೆ, ಕೆ.ಎಸ್.ಭರತ್​ ಗ್ಲೌಸ್​ ತೊಟ್ಟಿದರ ಹಿಂದೆ ಸಿಕ್ರೇಟ್​ ಇದೆ. ಅದೇ ಮಹೇಂದ್ರ ಸಿಂಗ್ ಧೋನಿ.

ಇಶಾನ್ ಪಾಲಿಗೆ ವಿಲನ್ ಆದ್ರಾ ಎಮ್​​.ಎಸ್.ಧೋನಿ?
ಇಂಥದ್ದೊಂದು ಕಾರಣ ಐಪಿಎಲ್​ನಲ್ಲಿ ನಡೆದ ಒಂದೇ ಒಂದು ಘಟನೆ. ಸಹಜವಾಗೇ ಐಪಿಎಲ್ ವೇಳೆ ಯುವ ಆಟಗಾರರ ಪಾಲಿಗೆ ಮೆಂಟರ್ ಆಗ್ತಿದ್ದ M.S.ಧೋನಿ, ಕೆ.ಎಸ್​.ಭರತ್​ಗೂ ವಿಕೆಟ್ ಕೀಪಿಂಗ್ ಸ್ಕಿಲ್ಸ್​ ಪಾಠ ಮಾಡಿದ್ದರು. ಇಂಗ್ಲೆಂಡ್​ ಟಫ್ ಕಂಡೀಷನ್ಸ್​ನಲ್ಲಿ ಹೇಗೆಲ್ಲಾ ವರ್ತಿಸುತ್ತೆ ಅನ್ನೋದರ ಬಗ್ಗೆ ಮಹತ್ವದ ಟಿಪ್ಸ್​ ನೀಡಿದ್ದರು. ಇದೇ ಈಗ ಇಶಾನ್ ಕಿಶನ್​ ಪಾಲಿಗೆ ವಿಲನ್ ಆಯ್ತ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆಲ್ಲಾ ಕಾರಣ ಜಾರ್ಖಂಡ್​ ಮೂಲದ ಆಟಗಾರನಿಗೇ ಬಿಟ್ಟು, ದೂರದ ಹೊರ ರಾಜ್ಯದ ಆಟಗಾರನಿಗೆ ಅಗತ್ಯ ಟಿಪ್ಸ್​ ನೀಡಿದ್ದೇ ಆಗಿದೆ.

IPL​ ವೇಳೆಯೇ ಫಿಕ್ಸ್​ ಆಗಿತ್ತಾ ವಿಕೆಟ್​ ಕೀಪರ್ ಸ್ಥಾನ?
ಇಶಾನ್​​ಗೆ ಧೋನಿ ವಿಲನ್ ಆಗಿದ್ದಾರೆ ಅನ್ನೋದು ಒಂದೇ ಮಾತ್ರವಲ್ಲ. ಧೋನಿ ಸಲಹೆ ಮೇರೆಗೆಯೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಗ್ಲೌಸ್​ ತೊಡೆಲು ಕಾರಣ ಅಂತಾನೂ ಹೇಳಲಾಗ್ತಿದೆ. ಐಪಿಎಲ್​ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾಗೆ, ಸ್ವತಃ ಧೋನಿಯೇ ವಿಕೆಟ್ ಕೀಪರ್ ಆಗಿ ಕೆ.ಎಸ್.ಭರತ್​ ಹೆಸರು ಶಿಫಾರಸು ಮಾಡಲಾಗಿದೆ ಎನ್ನಲಾಗ್ತಿದೆ.

ಅಗ್ರೆಸ್ಸಿವ್ ಇಶಾನ್ ಬದಲಿಗೆ ಡಿಫೆನ್ಸಿವ್ ಭರತ್​ಗೆ ಸ್ಥಾನ
ಪಂತ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾಗೆ ಅಗ್ರೆಸ್ಸಿವ್ ಬ್ಯಾಟರ್​ನ ಅಗತ್ಯತೆ ಇತ್ತು. ಇನ್​ಫ್ಯಾಕ್ಟ್ ಪಂತ್ ಪ್ಲೇವರ್​​​​​​​​​​​​ ಪರ್ಫೆಕ್ಟ್​ ಚಾಯ್ಸ್​ ಕೂಡ ಇಶಾನ್ ಕಿಶನ್ ಆಗಿದ್ದರು. ಕೌಂಟರ್ ಅಟ್ಯಾಕರ್ ಅಸ್ತ್ರವಾಗಿ ಇಶಾನ್​ ಬಳಿಸಿ ಎದುರಾಳಿಗೆ ಟಕ್ಕರ್ ನೀಡಬಹುದಿತ್ತು. ಆದ್ರೆ, ಇದರ ಬದಲಿಗೆ ಡಿಫೆನ್ಸೀವ್ ಆಟವಾಡೋ ಕೆ.ಎಸ್.ಭರತ್​ಗೆ ಚಾನ್ಸ್ ನೀಡಿದ್ದು ನಿಜಕ್ಕೂ ಸರಿಯಾ ಎಂಬ ಪ್ರಶ್ನೆ ಮೂಡ್ತಿದೆ. ಫಸ್ಟ್ ಕ್ಲಾಸ್ ಕ್ರಿಕೆಟ್​ನ ಅಂಕಿ-ಅಂಶಗಳಿಂದ ಯಾರು ಬೇಕಿತ್ತು ಎಂಬ ಪ್ರಶ್ನೆಯನ್ನ ಅಭಿಮಾನಿಗಳು ಕೇಳ್ತಿದ್ದಾರೆ.

ಫಸ್ಟ್​ ಕ್ಲಾಸ್​​​ನಲ್ಲಿ ಉಭಯ ಆಟಗಾರರು
ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ 90 ಇನ್ನಿಂಗ್ಸ್​ಗಳಿಂದ 4808 ರನ್ ಕಲೆ ಹಾಕಿರೋ ಕೆ.ಎಸ್​.ಭರತ್​, 27 ಅರ್ಧಶತಕ, 9 ಶತಕಗಳನ್ನ ಸಿಡಿಸಿದ್ದಾರೆ. 59.79ರ ಸ್ಟ್ರೈಕ್​​​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. 82 ಇನ್ನಿಂಗ್ಸ್​ಗಳಿಂದ ಇಶಾನ್ ಕಿಶನ್, 2985 ರನ್ ಕಲೆಹಾಕಿದ್ರೆ, ಈ ಪೈಕಿ 16 ಅರ್ಧಶತಕ, 6 ಶತಕ ಸಿಡಿಸಿದ್ದಾರೆ. 68.90ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇಂತಹ ಅಟ್ಯಾಕಿಂಗ್ ಬ್ಯಾಟಿಂಗ್ ಆಡೋ ಇಶಾನ್, ನಿಜಕ್ಕೂ ಪಂತ್​​​​​​​​​​​​​​​​​​​​​​​​​​​​​​​​​​​​​​​​​ ಸ್ಥಾನಕ್ಕೆ ಪರ್ಫೆಕ್ಟ್ ಚಾಯ್ಸ್ ಆಗಿದ್ದರು ಅನ್ನೋದರಲ್ಲಿ ಎರಡು ಮಾತಿಲ್ಲ.

ಟೆಕ್ನಿಕಲಿ ಸ್ಟ್ರಾಂಗ್​ ಇರೋ ಭರತ್​ಗೆ ಮಣೆಹಾಕ್ತಾ ಮ್ಯಾನೇಜ್​ಮೆಂಟ್​​?
ಟೀಮ್ ಮ್ಯಾನೇಜ್​ಮೆಂಟ್​ ಕೆ.ಎಸ್.ಭರತ್​ಗೆ ಮಣೆಹಾಕಲು ಇರೋ ಕಾರಣ. ಇಶಾನ್ ಕಿಶನ್​ರ ಎಕ್ಸ್​ಪ್ಲೋರಿವ್ ಬ್ಯಾಟಿಂಗ್​ಗಿಂತ ಕೆ.ಎಸ್.ಭರತ್​ರ ಬ್ಯಾಟಿಂಗ್​​​​​​ ಟೆಕ್ನಿಕಲಿ ಟಾಪ್​. ಇದಿಷ್ಟೇ ಅಲ್ಲ, ಕಳೆದ 2 ವರ್ಷಗಳಿಂದ ಟೀಮ್ ಇಂಡಿಯಾ ಜೊತೆ ಪ್ರಯಾಣ ಮಾಡಿರೊ ಕೆ.ಎಸ್.ಭರತ್​, ಇಂಗ್ಲೆಂಡ್ ಕಂಡೀಷನ್ಸ್​ ಬಗ್ಗೆನೂ ಚೆನ್ನಾಗಿ ಅರಿತಿದ್ದಾರೆ.

ವೈಟ್​ಬಾಲ್​​​ಗೆ ಕ್ರಿಕೆಟ್​ಗೆ ಹೋಲಿಸಿದ್ರೆ ಟೆಸ್ಟ್ ಕ್ರಿಕೆಟ್​ ಡಿಫರೆಂಟ್ ಗೇಮ್. ಇಲ್ಲಿ ಅಗ್ರೆಸ್ಸೀವ್ ಅಸ್ತ್ರಕ್ಕಿಂತ ತಾಳ್ಮೆಯೂ ಮುಖ್ಯ. ಅಷ್ಟೇ ಅಲ್ಲ, ರೆಡ್​ಬಾಲ್​ ಕ್ರಿಕೆಟ್​​ನಲ್ಲಿ ವಿಕೆಟ್ ಕೀಪಿಂಗ್ ಮಾಡೋದು ಬಿಗ್ ಚಾಲೆಂಜ್​. ಈಗಾಗಲೇ ಇಂತಹ ಚಾಲೆಂಜಿಂಗ್ ಕಂಡೀಷನ್ಸ್​ನಲ್ಲಿ ಭರತ್​, ತಮ್ಮ ವಿಕೆಟ್ ಕೀಪಿಂಗ್ ಸ್ಕಿಲ್ಸ್​ನ ಕೂಡ ಹೊರಹಾಕಿದ್ದಾರೆ. ಇದೇ ಕಾರಣಕ್ಕೆ ಟೀಮ್ ಮ್ಯಾನೇಜ್​ಮೆಂಟ್ ಭರತ್​ಗೆ ಪ್ರತಿಷ್ಠಿತ ಪಂದ್ಯದಲ್ಲಿ ಚಾನ್ಸ್​ ನೀಡೋಕೆ ಮೇನ್ ರೀಸನ್​.

ಒಟ್ಟಿನಲ್ಲಿ ಅದೇನೇ ಆಗಲಿ, ಮ್ಯಾನೇಜ್​ಮೆಂಟ್​ ನಂಬಿಕೆಗೆ ತಕ್ಕಂತೆಯೇ ಈಗ ವಿಕೆಟ್ ಹಿಂದೆ ಭರತ್​, ಬೊಂಬಾಟ್ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಇದನ್ನೇ ವಿಕೆಟ್ ಮುಂದೆಯೂ ನೀಡಿ ಐಸಿಸಿ ಟ್ರೋಫಿ ಗೆಲ್ಲಿಸಿಕೊಡಲಿ ಅನ್ನೋದೇ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

The post WTC Final: ಇಶಾನ್ ಕಿಶನ್​ಗೂ ಅನ್ಯಾಯ.. ಇದಕ್ಕೆಲ್ಲ ಧೋನಿಯೇ ಹೊಣೆ ಎಂದ ಅಭಿಮಾನಿಗಳು appeared first on News First Kannada.